ವಸಂತ ಮೊಲ್ಲೆ, ಮಧ್ಯಾಹ್ನ ಮಲ್ಲಿಗೆ, ಕಾಡರಮಲ್ಲಿಗೆ ಎಂಬ ಹೆಸರುಗಳಿಂದ ಸಹ ಪ್ರಸಿದ್ಧವಾಗಿರುವ ಸಣ್ಣ ಮೊಲ್ಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಪೊದೆ ಸಸ್ಯ. ಇದು ಭಾರತ, ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಂಡುಬರುತ್ತದೆ. ದಕ್ಷಿಣ ಭಾರತದಲ್ಲೆಲ್ಲ ಕಾಣದೊರೆಯುವ ಇದನ್ನು ಉತ್ತರಪ್ರದೇಶ, ಬಿಹಾರ ಹಾಗೂ ಬಂಗಾಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಲಾಗುತ್ತದೆ. == ವಿವರಣೆ == ಇದರ ಎಲೆಗಳು ಸರಳ ಬಗೆಯವು; ಬಲು ಅಪೂರ್ವವಾಗಿ ಮೂರು ಪತ್ರಕಗಳನ್ನು ಒಳಗೊಂಡ ಸಂಯುಕ್ತ ಬಗೆಯವಾಗಿರುವುದುಂಟು. ಆಗಲೂ ಮಧ್ಯದ ಪತ್ರವೇ ಪ್ರಧಾನವಾಗಿರುತ್ತದೆ. ಹೂಗಳು ಬಿಳಿ ಬಣ್ಣದವು; ಹಲವಾರು ಹೂಗಳು ಸೀಮಾಕ್ಷಿ ಮಂಜರಿಗಳಲ್ಲಿ ಜೋಡಣೆಗೊಂಡಿವೆ. == ಉಪಯೋಗಗಳು == ಅಲಂಕಾರಿಕ ಉದ್ದೇಶಗಳಿಗೆ ಮತ್ತು ಹಬ್ಬಗಳಲ್ಲಿ ಇದನ್ನು ಬಳಸಲಾಗುತ್ತದೆ. == ಉಲ್ಲೇಖಗಳು ==